ಮಳೆ ಬಂತು ಮಳೆ ಬಂತು

Unknown Author

6/25/2025

ಮಳೆ ಬಂತು ಮಳೆ ಬಂತು

ಸಸ್ಯ ಶಾಮಲೆ ಸಸ್ಯ ಶ್ಯಾಮಲೆ ಕುಸುಮ ಕೋಮಲೆ ಹಿಮವನ್ನೊದ್ದ ಶ್ವೇತ ಶೀತಲೆ ಮಹೇಂದ್ರ ಮಲೆಯ ಸಹ್ಯಾದ್ರಿಯ ಸಾಲೆ.. ಹಸಿರನ್ನೊದ್ದು ಕಂಗೊಳಿಸುವ ಸಸ್ಯ ಶಾಮಲೆ ಗಿರಿಪರ್ವತಗಳ ಬಸರಿಂದ ಸಲೀಲದಲಿ ಜಲಜಲ ಜಲಧಾರೆಯ ಉಗಮ ಕಾವೇರಿ ಕನಿಕೆ ಸುಜ್ಯೋತಿಯರ ಸಂಗಮ ಧರಣಿಯ ಒಡಲಿನಲಿ ಜೀವ ಕಳೆಯ ಸಂಭ್ರಮ|| ಮಾತೆ.. ನಿನ್ನೊಡಲು ಅಭೇದ್ಯ ವಿಸ್ಮಯಗಳ ತಾಣ ಇಲ್ಲಿ ಹಸಿರು ಅಲ್ಲಿ ಬಯಲು ಇಲ್ಲಿ ಮೈ ಕೊರೆವ ಚಳಿ ಅಲ್ಲಿ ಸುಡುವ ಕಡು ಬಿಸಿಲು ಏನು ನಿನ್ನ ವೈಪರೀತ್ಯ ಇದು ಮನುಕುಲಕ್ಕೆ ಸವಾಲು|| ನಿನ್ನೊಡಲು ಅಗರ್ಭ ಖನಿಜಗಳ ಕಣಜ ಹೊಕ್ಕಿ ಹೆಕ್ಕಿ ಬರಿದು ಮಾಡುತ್ತಿಹನು ಮನುಜ|| ನಿನ್ನ ಮಡಿಲು ಅಸಂಖ್ಯ ಸಸ್ಯ ಸಂಜೀವಿನಿಯ ಗಹನಾರಣ್ಯ ನಿನ್ನೊಡಲಿಗೆ ಕೊಡಲಿಯನ್ನಿಟ್ಟು ಮಾಡುತ್ತಿಹನು ಮರಗಳ ಹನನ|| ಪ್ರಕೃತಿ ರಕ್ಷಿಸುತ್ತಿದೆ ಎಮ್ಮನು ಬೆಟ್ಟದ ಸಾಲುಗಳಾಗಿ ನದಿ ತೊರೆಗಳು ಜೀವ ರಾಶಿಯ ದಾಹ ಜಲವಾಗಿ ಉಸಿರ ನಿಲ್ಲಿಸದೆ ಉಸಿರಾಡಲು ತಂಗಾಳಿಯಾಗಿ ದಯೆಯಿರುವ ಧರಿತ್ರಿಯ ಉಳಿಸುವ ಹೊಣೆ ನಮ್ಮ ನಿಮ್ಮೆಲ್ಲರಿಗಾಗಿ|| ಶ್ರೀಮತಿ ವಿಮಲಾ ದಶರಥಾ ವೀರಾಜಪೇಟೆ