ಚಿಕ್ಕಬಳ್ಳಾಪುರ: 16 ಡಿಸೆಂಬರ್ ಪಾಪಾಗ್ನಿಮಠಕ್ಕೆ ಭೇಟಿನೀಡಿದ ಶ್ರೀಸುಜ್ಞಾನಮೂರ್ತಿ,

Unknown Author

12/19/2025

ಚಿಕ್ಕಬಳ್ಳಾಪುರ: 16 ಡಿಸೆಂಬರ್ 
ಪಾಪಾಗ್ನಿಮಠಕ್ಕೆ ಭೇಟಿನೀಡಿದ ಶ್ರೀಸುಜ್ಞಾನಮೂರ್ತಿ,

ಡಿಸೆಂಬರ್ 16-12-2025 ಮಂಗಳವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಕಳಾವರ ಗ್ರಾಮದಲ್ಲಿರುವ ಶ್ರೀಕಾಶಿವಿಶ್ವನಾಥದೇವಾಲಯಕ್ಕೆ ಕರ್ನಾಟಕ ಸರ್ಕಾರದ ವಿಶ್ವಕರ್ಮ ಅಭಿವೃದ್ದಿನಿಗಮದ ಅಧ್ಯಕ್ಷರಾದ ಶ್ರೀ ಪಿ ಸುಜ್ಞಾನಮೂರ್ತಿಯವರು ಭೇಟಿ ನೀಡಿ ದೇವಾಲಯವನ್ನು ವೀಕ್ಷಿಸಿ ದೇವರ ಅನುಗ್ರಹವನ್ನು ಬೇಡಿದರು, ಪಾಪಾಗ್ನಿಮಠವು ಚಿಕ್ಕಬಳ್ಳಾಪುರ ನಗರದ ಕೂಗಳತೆಯ ಪ್ರಸಿದ್ಧ ವಾದ ಸ್ಥಳವಾಗಿದೆ, ಸ್ಕಂದಗಿರಿ ತಪ್ಪಲಿನಲ್ಲಿ ಪಾಪಾಗ್ನಿ ನದಿಯು ಹುಟ್ಟುವ ಸ್ಥಳವಾಗಿದ್ದು ಇದರಿಂದ ಇದನ್ನ ಪಾಪಾಗ್ನಿಮಠ ಎಂದೆ ಪ್ರಸಿದ್ಧವಾಗಿದೆ, ಇಲ್ಲಿ 16 ನೇಯ ಶತಮಾನದಲ್ಲಿ ವೀರಪಾಪಾಮಾಂಬಾ ವೀರಭೋಜಚಾರ್ಯರೆಂಬ ದಂಪತಿಗಳು ಇದ್ದರು ಇವರಿಗೆ ಮಕ್ಕಳಿರಲಿಲ್ಲ ಇವರು ದತ್ತು ಪಡೆದು ಸಾಕಿದ ಮಗನೆ ಬ್ರಹ್ಮಯ್ಯ ಇವರು ಲೋಕವಿಖ್ಯಾತ ಕಾಲಾಜ್ಞಾನಿಗಳಾಗಿದ್ದರು, ಇವರು ಆಡಿಬೆಳೆದ ಸ್ಥಳವೆ ಪಾಪಾಗ್ನಿಮಠ, ಬ್ರಹ್ಮಯ್ಯನು ಯುವಕನಾಗಿದ್ದಾಗ ಆಂದ್ರಪ್ರದೇಶದ ಕಡಪಕಡೆ ಹೋಗಿ ತಮ್ಮ ಜೀವಿತ ಅವಧಿಯನ್ನ ಆಧ್ಯಾತ್ಮಿಕವಾಗಿ ಸಮಾಜ ಸುಧಾರಣೆಯನ್ನು ಮಾಡುವ ಮೂಲಕ ವೀರಬ್ರಹ್ಮೇಂದ್ರ ಸ್ವಾಮಿ ಎಂದೆ ಪ್ರಸಿದ್ಧರಾಗುತ್ತಾರೆ, ಪಾಪಾಗ್ನಿಮಠದ ಕಾರ್ಯಕ್ರಮದಲ್ಲಿ ಶ್ರೀ ಪಿ ಸುಜ್ಞಾನಮೂರ್ತಿ ಯವರು ವಿಶ್ವಕರ್ಮ ಅಭಿವೃದ್ದಿನಿಗಮದ ಸವಲತ್ತುಗಳ ಬಗ್ಗೆ ಮಾಹಿತಿಯನ್ನ ನೀಡಿದರು, ಈ ಸಂದರ್ಭದಲ್ಲಿ ಕನ್ನಡ ಸೋಮು, ಸತೀಶ್ ಮುಳ್ಳೂರು, ಕೊಡಗು, ದೇವಾಲಯದ ಅರ್ಚಕ ಸಮೂದಾಯದವರು, ಚಿಕ್ಕಬಳ್ಳಾಪುರದ ಸಮಾಜದ ಬಂಧುಗಳು, ಮಹಿಳೆಯರು ಭಾಗವಹಿಸಿದ್ದರು,