ನಂದಿಬೆಟ್ಟದ ತಪ್ಪಲಿನ ಶ್ರೀ ಶಿವಾತ್ಮನಂದ ಶ್ರೀಗಳ ನಾಲ್ಕನೆ ವರ್ಷದ ಪುಣ್ಯರಾಧನೆ
Unknown Author
12/17/2025

ಚಿಕ್ಕಬಳ್ಳಾಪುರ 16-12-2026 ಮಂಗಳವಾರ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟ ತಪ್ಪಲಿನ ನಂದಿಗ್ರಾಮದ ಸಮೀಪದ ಜ್ಞಾನನಂದ ಆಶ್ರಮದ ಸಿದ್ದನಗವಿಯಲ್ಲಿ ಶ್ರೀ ಶಿವಾತ್ಮನಂದ ಶ್ರೀಗಳ 4ನೇಯ ವರ್ಷದ ಪುಣ್ಯರಾಧನೆ ನಡೆಯಿತು, ಈ ಸಂದರ್ಭದಲ್ಲಿ ಮುಖ್ಯವಾಗಿ ಕರ್ನಾಟಕ ರಾಜ್ಯ ವಿಶ್ವಕರ್ಮ ಅಭಿವೃದ್ದಿನಿಗಮದ ಅಧ್ಯಕ್ಷರಾದ ಶ್ರೀ ಪಿ ಸುಜ್ಞಾನಮೂರ್ತಿಯವರು ಭಾಗವಹಿಸಿದ್ದರು, ಹಿನ್ನೆಲೆ: ಶ್ರೀ ಶಿವಾತ್ಮನಂದ ಶ್ರೀಗಳು ಪೂರ್ವ ಶ್ರಮದಲ್ಲಿ ಬಾಗಲಕೋಟೆಯವರಾಗಿದ್ದು, ಪ್ರಖ್ಯಾತ ಸಾಹಿತ್ಯ ಸಂಶೋಧಕರಾಗಿದ್ದ ಶ್ರೀ ಜೀವಣ್ಙ ಮಸಳಿಯವರ ಮಗನಾಗಿದ್ದರು, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದರು,ಅನೇಕ ಮಾಧ್ಯಮಗಳಲ್ಲಿ ವೃತ್ತಿಯನ್ನ ಮಾಡಿದ್ದರು, ಕೊಯಮತ್ತೂರು, ಹರಿದ್ವಾರಗಳಲ್ಲಿ ಸಂಸ್ಕೃತ ಪಂಡಿತರಾಗಿದ್ದರು, ಅನೇಕ ರಾಜಕಾರಿಣಿಗಳ ಸಂಪರ್ಕವಿತ್ತು, ಮೂಲ ಹೆಸರು ಕರುಣಾಕರ ಎಂದಿದ್ದು ಸನ್ಯಾಸ ಸ್ವೀಕರಿಸಿದ ನಂತರ ಶ್ರೀಗಳು ಶಿವಾತ್ಮನಂದ ಶ್ರೀಗಳಾದರು, ಹುಲಿಯೂರುದುರ್ಗದ ಶ್ರೀಕಾಳಿಕಾಂಬ ದೇವಾಲಯದಲ್ಲಿ ಕೆಲಕಾಲ ಇದ್ದರು, ನಂತರ ಸಿದ್ದನ ಗವಿಯಲ್ಲಿ ನೆಲೆಸಿದ್ದರು, ಶ್ರೀಗಳು ಅನೇಕ ದೇಶಗಳಲ್ಲಿ ಸನಾತನ ಧರ್ಮದ ಬಗ್ಗೆ ಪ್ರಚಾರ ಮಾಡಿದ್ದರು, ಅನೇಕ ಗ್ರಂಥಗಳನ್ನ ರಚಿಸಿದ್ದರು, ಸಂಸ್ಕೃತ ಹಿಂದಿ ತಮಿಳು ಇಂಗ್ಲೀಷ್ ಭಾಷೆಗಳನ್ನ ಬಲ್ಲವರಾಗಿದ್ದರು, ಇವರಿಗೆ ಆರ್ಟಆಫ್ ಲಿವಿಂಗ್ ನ ಶ್ರೀ ರವಿಶಂಕರ ಗುರುಜೀಯವರು ಹತ್ತಿರದವರಾಗಿದ್ದು, ಆದಿಚಂಚನಗಿರಿ ಮಠದ ಶ್ರೀ ನಿರ್ಮಲನಂದ ಶ್ರೀಗಳು ಶಿವಾತ್ಮನಂದ ಶ್ರೀಗಳ ಜ್ಞಾನಕ್ಕೆ ಗೌರವಿಸುತ್ತಿದ್ದರು, ಶ್ರೀಗಳು ತಮ್ಮ ಜೀವಿತ ಅವದಿಯಲ್ಲಿ ವೇದಭಗವಾನ್ ಎನ್ನುವ ಗ್ರಂಥವನ್ನು ರಚಿಸಿದರು, ಅದರ ಮುದ್ರಣದ ವಿಷಯವಾಗಿ ಓಡಾಟ ನಡೆಸುವಾಗ ನಡೆದ ಸಣ್ಣ ಅಪಘಾತದಿಂದಾಗಿ ಅಕಾಲಿಕವಾಗಿ 58 ನೇಯ ವಯಸ್ಸಿನಲ್ಲಿ ಬ್ರಹ್ಮಕ್ಯರಾದರು, ಈ ಪುಣ್ಯರಾಧನೆ ಕಾರ್ಯಕ್ರಮದಲ್ಲಿ ಎಸ್ ಎಸ್ ಎಸ್ ಚಾರಿಟಬಲ್ ಟ್ರಸ್ಟಿನ ಶೇಖರ್ ರವರು ಮಾತನಾಡಿ ಶ್ರೀಗಳು ತಮ್ಮ ಕೊನೆಯ ಜೀವಿತ ಅವಧಿಯಲ್ಲಿ ನೆಮ್ಮದಿಯಾಗಿ ಕಳೆದ ಸ್ಥಳವಾಗಿದೆ ನಾವು ಪ್ರತಿವರ್ಷ ಗುರುಗಳ ಸ್ಮರಣೆಯನ್ನು ಮಾಡುತ್ತಿದ್ದೇವೆ ಎಂದರು, ಪಿ ಸುಜ್ಞಾನ ಮೂರ್ತಿಯವರು ಮಾತನಾಡುತ್ತ ವೀರಬ್ರಹ್ಮೇಂದ್ರ ಸ್ವಾಮಿಗಳಂತೆ ನಮ್ಮ ಶ್ರೀಗಳು ಅಪರೂಪದ ಜ್ಞಾನಿಗಳಾಗಿದ್ದು ಅವರ ಸ್ಮಾರಕದ ಅಭಿವೃದ್ದಿಗೆ ಸಹಕಾರ ನೀಡುವುದಾಗಿ ತಿಳಿಸಿದರು, ಈ ಸ್ಥಿತಿಯಲ್ಲಿ ನೋಡುವುದಕ್ಕೆ ನನಗೆ ಬೇಸರವಾಗುತ್ತಿದೆ ಎಂದ ನೊಂದುಕೊಂಡರು, ಜಮೀನು ವ್ಯಾಜ್ಯದಿಂದಾಗಿ ಶ್ರೀಗಳ ಸಮಾಧಿಯು ಸಂಪೂರ್ಣವಾಗಿ ಹಾಳಾಗಿದ್ದು ಸಮೂದಾಯದ ಒಳ ಹುಳುಕು ಎದ್ದುಕಾಣುತ್ತಿತ್ತು, ಕಾರ್ಯಕ್ರಮದಲ್ಲಿ ಹೈದರಾಬಾದಿನ ಶ್ರೀ ಕಾತೇಂದ್ರಸ್ವಾಮೀಜಿಗಳು, ಕನ್ನಡ ಸೋಮು,ವೇಣುಗೋಪಾಲ ಚಾರ್, ಬಿ ಚಂದ್ರ ಬಾಬು, ಮುಳಬಾಗಿಲು, ದೀಪಕ್, ಕುಮಾರ್, ಶಿವಕುಮಾರ್, ಕೃಷ್ಣ ಚಾರ್, ಋತ್ವಿಜರಾದ ಕಾಶಿವಿಶ್ವನಾಥ ಶಾಸ್ತ್ರಿ, ಅನಿಲ್, ಸ್ಥಪತಿಶ್ರೀಮೋಹನರಾವ್ ದಂಪತಿಗಳು, ಮಾಗಡಿಯ ಅಂಜನಾದ್ರಿಬೆಟ್ಟದ ಆಶ್ರಮದ ಶ್ರೀ ಗುರುದೇವ್, ತುಮಕೂರಿನ ಬಂಧುಗಳು,ಮಹಿಳೆಯರು, ಸತೀಶ್ ಮುಳ್ಳೂರು ಕೊಡಗು, ಶ್ರೀಗಳ ಹತ್ತಿರದ ಹಿತೈಷಿಗಳು, ಶಿಷ್ಯರು ಭಾಗವಹಿಸಿದ್ದರು,



