ಹಾಸನದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಕೊನೆ ಆಷಾಢ ಶುಕ್ರವಾರ ಭಕ್ತಿಗೌರವದಿಂದ  ವಿಶೇಷವಾದ ಪೂಜೆ

Nannuru-team

Nannuru-team

7/19/2025

ಹಾಸನದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಕೊನೆ ಆಷಾಢ ಶುಕ್ರವಾರ ಭಕ್ತಿಗೌರವದಿಂದ  ವಿಶೇಷವಾದ ಪೂಜೆ

ದೇವಾಲಯಗಳಲ್ಲಿ ಮಾನಸಿಕ ನೆಮ್ಮದಿ ಹೊಂದಿ ಸಾರ್ಥಕ ಜೀವನ ನಡೆಸಬಹುದಾಗಿದೆ ಎಂದು ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರಾದ ಸಿ. ಎಂ. ಚಂಚಲ ನುಡಿದರು. ಅವರು ಶುಕ್ರವಾರ ಹಾಸನ ನಗರದ ಸಂಪೂರ್ಣ ಶಿಲಾಮಯ ಶ್ರೀ ಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ಆಷಾಢ ಶುಕ್ರವಾರದ ಕೊನೆಯ ವಾರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜೀವನದ ಸುಪ್ತ ಬೇಗುದಿಗಳನ್ನು ದೇವರ ಮೊರೆ ಹೋಗಿ ಶುದ್ದ ಮನಸ್ಸಿನಿಂದ ನಿವೇದಿಸಿಕೊಂಡಾಗ ಆತ್ಮಸ್ಥೈರ್ಯ ಹೊಂದಿ ಸಂಕಲ್ಪಿತ ಗುರಿ ಸಾಧಿಸಿ ಅದಮ್ಯ ಉತ್ಸಾಹದಿಂದ ಜೀವನ ಸಾಗಿಸಬಹುದೆಂದರು. ಕಾಳಿಕಾಂಬ ದೇವಾಲಯದ ಶಿಲ್ಪಕಲಾ ಸೌಂದರ್ಯ ಬಹುಜನರನ್ನು ಸೆಳೆಯುತ್ತಾ ಜಿಲ್ಲೆಯ ಹೆಮ್ಮೆಯ ಧಾರ್ಮಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರವಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವಾರದ ವಿಶೇಷ ಪೂಜಾ ಸೇವಾರ್ಥದಾರರಾದ ಸಿ. ಎಂ. ಚಂಚಲ, ಹೆಚ್. ಕೆ. ಶ್ರೀಕಂಠಮೂರ್ತಿ ಮತ್ತು ರಂಗಪೂಜಾ ಸೇವಾರ್ಥದಾರರಾದ ಕೆ. ಆರ್. ಕುಮಾರ್ ದಂಪತಿಗಳನ್ನು ಗೌರವಿಸಲಾಯಿತು. ಸಂಗೀತ ವಿದುಷಿ ಗೀತಾ ಭಟ್ ರವರ ತಂಡ ಭಜನಾ ಸೇವೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಹೆಚ್. ವಿ. ಹರೀಶ್, ದೇವಾಲಯದ ಪೂಜಾ ಸಮಿತಿಯ ಅಧ್ಯಕ್ಷ ಹೆಚ್. ಕೆ. ಆನಂದ್, ತಾಲೂಕು ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಎ. ಬ್ಯಾಟರಂಗಾಚಾರ್, ಪ್ರಮುಖರಾದ ಹೆಚ್. ಎಸ್. ಆನಂದ್, ಎಂ. ಟಿ. ಸುರೇಶ್, ಪಿ. ಟಿ. ಗೋಪಾಲ್, ಹೆಚ್. ಎನ್. ಲಕ್ಷ್ಮಿಕಾಂತ್, ರುಕ್ಮಾಂಗದಚಾರ್ ಮತ್ತಿತರರು ಹಾಜರಿದ್ದರು. ಹಾಸನದ ಶ್ರೀ ಕಾಳಿಕಾಂಬ ಕಮ್ಮಟೇಶ್ವರ ದೇವಾಲಯವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ ವರದಿ: ಹೆಚ್,ವಿ, ಹರೀಶ್ ಹಾಸನ