ಒಂದೆ ವಧುವನ್ನು ವರಿಸಿದ ಸಹೋದರರು
Nannuru-team
7/21/2025

ಜುಲೈ 21: ಇಂದು ಪ್ರಪಂಚವು ಬಹಳ ವೇಗವಾಗಿ ಬೆಳೆಯುತ್ತಿದ್ದು ಆಧುನಿಕ ಜಗತ್ತಿನಕಡೆ ಹೋಗುತ್ತಿದೆ, ತಂತ್ರಜ್ಞಾನದ ಪರಿಣಾಮ ಜಗತ್ತು ಅಂಗೈಯಲ್ಲೆ ಇದೆ, ಆಧುನಿಕತೆ ಬೆಳೆದಂತೆಲ್ಲ ಸಂಸ್ಕೃತಿ ಸಂಪ್ರದಾಯಗಳು ಬದಲಾಗುತ್ತಿವೆ, ಹಣವಂತರು ದುಬಾರಿಯಾದ ಮಧುವೆ ಮಾಡುತ್ತಿರುವರು, ಮನೆಮುಂದೆ ಮಾಡುತ್ತಿದ್ದ ಮದುವೆಗಳು ಕಲ್ಯಾಣ ಮಂಟಪಕ್ಕೆ ಬಂದಿವೆ, ಮುಹೂರ್ತಕ್ಕಿಂತ ಆರತಕ್ಷತೆಯೆ ಅದ್ದೂರಿಯಾಗಿ ನಡೆಯುತ್ತಿದೆ, ಹೀಗಿರುವಾಗ ಹಿಮಚಲಪ್ರದೇಶದಲ್ಲಿ ಒಂದೆವಧುವನ್ನ ಇಬ್ಬರು ಸಹೋದರರು ಮದುವೆಯಾಗಿರುವುದು ವರದಿಯಾಗಿದೆ, ಹಿಮಚಲಪ್ರದೇಶದ ಸಿರಮೊರ್ ಜಿಲ್ಲೆಯ ಶಿಲೈಗ್ರಾಮದಲ್ಲಿ, ಪ್ರದೀಪ್ ಕಪಿಲ್ ಎನ್ನುವ ಸಹೋದರರು ಸುನಿತ ಎನ್ನುವ ವಧುವನ್ನ ವಿವಾಹವಾಗಿರುವರು, ಇವರು ಹಟ್ಟಿ ಎನ್ನುವ ಬುಡಕಟ್ಟಿನವರಾಗಿದ್ದು, ಈ ಪದ್ದತಿಯು ಶತಮಾನಗಳಷ್ಟು ಹಳೆಯ ಪದ್ದತಿಯಾಗಿದ್ದು ಇದನ್ನ ಜೋಡಿದಾರ್ ಎಂದು ಕರೆಯುತ್ತಿದ್ದರು, ಈ ಯುವಕರು ಹಳೆಯ ಪದ್ದತಿಗೆ ಹೊಸ ರೂಪವನ್ನು ಕೊಟ್ಟಿದ್ದಾರೆ, ಈ ವಿಷಯವು ಪರ ವಿರೋಧವಾಗಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ,




