ಹಾಸನದ ಕಾಳಿಕಾಂಬ ಕಮ್ಮಟೇಶ್ವರ ದೇವಾಲಯದಲ್ಲಿ ಪ್ರಥಮ ಶ್ರಾವಣ ಶುಕ್ರವಾರ ವಿಶೇಷ ಪೂಜೆ
Nannuru-team
7/25/2025

ಹಾಸನ ಜುಲೈ 25: ಹಾಸನ ನಗರದ ಸಂಪೂರ್ಣ ಶಿಲಾಮಯ ಶ್ರೀ ಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಥಮ ಶುಕ್ರವಾರದ ವಿಶೇಷ ಪೂಜಾ ಕಾರ್ಯಕ್ರಮದ ಅಂಗವಾಗಿ ಶ್ರೀ ಕಮಠೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಕ್ಷೇತ್ರ ಮಾತೆ ಕಾಳಿಕಾಂಬೆಗೆ ಸಹಸ್ರ ಕುಂಕುಮಾರ್ಚನೆ, ವಸ್ತ್ರಾಲಂಕಾರ ಮತ್ತು ಪುಷ್ಪಾಲಂಕಾರ ಸೇವೆ ನೆರವೇರಿತು. ಪೂಜಾ ಸೇವಾರ್ಥದಾರರಾದ ಶಾಲಿನಿ ಮತ್ತು ಕೋದಂಡರಾಮ ದಂಪತಿಗಳನ್ನು ಕ್ಷೇತ್ರದ ಸಂಪ್ರದಾಯದಂತೆ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಹೆಚ್. ವಿ. ಹರೀಶ್, ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್. ಬಿ. ಕುಮಾರಚಾರ್, ಪೂಜಾ ಸಮಿತಿಯ ಅಧ್ಯಕ್ಷ ಹೆಚ್. ಕೆ. ಆನಂದ್, ಗಾಯತ್ರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಅನಿಲ ಪದ್ಮನಾಭ, ಸಮಾಜದ ಪ್ರಮುಖರಾದ ಎ. ಬ್ಯಾಟರಂಗಾಚಾರ್ , ಬಿ. ಲೋಕೇಶ್, ವೈ. ಮಧುಕುಮಾರ್, ಹೆಚ್. ಎಸ್. ಆನಂದ್, ಎಂ. ಟಿ. ಸುರೇಶ್ ಮತ್ತು ಕೆ. ಎಸ್. ಕುಮಾರ್ ಮತ್ತಿತರರು ಹಾಜರಿದ್ದರು. ವರದಿ: ಹೆಚ್ ವಿ ಹರೀಶ್ ಹಾಸನ




