ಮೋಕೆದ ಸಿಂಗಾರಿ ಈ ಹಾಡು ಬರೆದವರು ಯಾರು ಗೊತ್ತ...?
Unknown Author
7/29/2025

ಮೋಕೆದ ಸಿಂಗಾರಿ ಈ ಹಾಡು ತುಳುನಾಡಿನ ಲ್ಲಿ ಪ್ರಸಿದ್ಧವಾಗಿದ್ದು ಇದನ್ನ ಕೇಳಿ ಆನಂದಿಸದೆ ಇರುವವರೆ ಇಲ್ಲ, ಹಾಗಾದರೆ ಈ ಹಾಡನ್ನ ಬರೆದವರು ಯಾರು...? ಈ ಪ್ರಶ್ನೆ ಮೂಡಬಹುದು,ಈ ಹಾಡನ್ನ ಬರೆದವರು ಶ್ರೀ ಎಂ ಕೆ ಸೀತಾರಾಮ್ ಕುಲಾಲ್ ಇವರು ರಂಗಕರ್ಮಿಯಾಗಿದ್ದು, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಆಗಿದ್ದರು, ಗೀತ ರಚನೆಕಾರರಾಗಿದ್ದರು, ಬಯ್ಯುಮಲ್ಲಿಗೆ, ಬೆಳ್ಳಿತೋಟ,ಉಡಲ್ದ ತುಡರ್, ಕೋಟಿಚನ್ನಯ್ಯ,ಬದಿ ಸೇರಿದಂತೆ ಹನ್ನೊಂದು ಚಲನಚಿತ್ರಗಳಿಗೆ ಸಾಹಿತ್ಯವನ್ನು ಬರೆದಿರುವರು, 66 ಕೃತಿಗಳನ್ನ ರಚಿಸಿರುವರು, ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದ ಇವರು 1940 ರಲ್ಲಿ ಜನಿಸಿ 28 ಜುಲೈ 2019 ರಂದು ನಿಧನರಾದರು,




