ಇದನ್ನ ತಿಂದಿದ್ದರಿಂದ ಕೆ ಎಸ್ ಆರ್ ಟಿ ಸಿ ಚಾಲಕರು ಅನರ್ಹರಾದರು

Nannuru-team

Nannuru-team

7/31/2025

ಇದನ್ನ ತಿಂದಿದ್ದರಿಂದ ಕೆ ಎಸ್ ಆರ್ ಟಿ ಸಿ ಚಾಲಕರು ಅನರ್ಹರಾದರು

ಇದೊಂತರ ವಿಚಿತ್ರ ವಿಷಯವಾದರು ಸತ್ಯ ಇದು ಕೆಎಸ್ ಆರ್ ಟಿ ಸಿ ಚಾಲಕರಿಗೆ ಆದ ಪಿಕಲಾಟ, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತನ್ನ ಚಾಲಕರಿಗೆ ಕಟ್ಟು ನಿಟ್ಟಾಗಿ ಒಂದು ಆದೇಶವನ್ನ ಹೊರಡಿಸಿತ್ತು, ಸಾರ್ವಜನಿಕರ ಮತ್ತು ಅಪಘಾತ ತಡೆಗಟ್ಟುವ ಹಿತದೃಷ್ಟಿಯಿಂದ ಚಾಲಕ ಬಂಧುಗಳು ಬಸ್ಸು ಹತ್ತುವ ಮುಂಚೆ ಆಲ್ಕೊಹಾಲ್ ಪರೀಕ್ಷೆಗೆಒಳಗಾಗಬೇಕು,ಇದು ನಿಯಮ, ಇದರಂತೆ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಪಂಡಲಂ ಡಿಪೋದಲ್ಲಿ ಚಾಲಕರಿಗೆ ಬಸ್ಸನ್ನ ಕೊಡುವ ಮುಂಚೆ ಬಸ್ಸಿಗೆ ಹತ್ತುವ ಚಾಲಕ ಬಂಧುಗಳ ಆಲ್ಕೋಹಾಲ್ ಪರೀಕ್ಷೆಯನ್ನ ಮಾಡಲಾಗುತ್ತಿತ್ತು ಅದರಲ್ಲಿ ಮೂವರು ಚಾಲಕರ ಪರೀಕ್ಷೆಯಲ್ಲಿ ಆಲ್ಕೋಹಾಲ್ ಪತ್ತೆಯಾಯಿತು, ಆದರೆ ಇದನ್ನ ಚಾಲಕರು ನಿರಾಕರಿಸಿದರು, ಅದು ನಿಜವು ಆಗಿತ್ತು, ಅನೇಕ ಬಾರಿ ವಿವಿಧ ರೀತಿಯಲ್ಲಿ ಆಲೋಚಿಸಿದಾಗ ಒಂದು ವಿಷಯ ಬೆಳಕಿಗೆ ಬಂತು, ಈ ಚಾಲಕರು ಕೆಲಸಕ್ಕೆ ಹಾಜರಾಗುವ ಮುಂಚೆ ಹಲಸಿನ ಹಣ್ಣನ್ನ ಸೇವಿಸಿ ಬಂದಿದ್ದರು, ಇದರಿಂದ ಆಲ್ಕೋಹಾಲ್ ಪರೀಕ್ಷೆಯಲ್ಲಿ ಆಲ್ಕೋಹಾಲ್ ಸೇವಿಸಿದಂತೆ ಕಂಡು ಬಂದಿತ್ತು, ಇದನ್ನ ಅರಿತ ಅಧಿಕಾರಿಗಳು ಆಲ್ಕೋಹಾಲ್ ಪರೀಕ್ಷೆಯಲ್ಲಿ ಪಾಸಾದವರಿಗೆ ಹಲಸಿನ ಹಣ್ಣನ್ನ ತಿಂದ ನಂತರ ಪರೀಕ್ಷೆ ಮಾಡಿದಾಗ ಆಲ್ಕೋಹಾಲ್ ಅಂಶ ಪತ್ತೆಯಾಗಿದೆ, ಇದೊಂತರ ವಿಚಿತ್ರ ಅನಿಸಿದರು ಸತ್ಯವಾಗಿದೆ ಎಂದು ಮಾಧ್ಯಮ ಗಳು ಪ್ರಕಟಿಸಿವೆ, ನೀವು ಸಹ ಹಲಸಿನ ಹಣ್ಣನ್ನ ತಿಂದು ವಾಹನ ಚಲಾಯಿಸುವ ಮುಂಚೆ ಎಚ್ಚರಿಕೆಯನ್ನ ವಹಿಸಬೇಕಾಂತಾಗಿದೆ,