ಹಾಸನ ನಗರದ ಶ್ರೀಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ಅದ್ದೂರಿಯ ರಂಗಪೂಜೆ

Nannuru-team

Nannuru-team

8/2/2025

ಹಾಸನ ನಗರದ ಶ್ರೀಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ಅದ್ದೂರಿಯ ರಂಗಪೂಜೆ

ಹಾಸನ ಆ 02: ಗರ್ಭಗುಡಿಯಿಂದ ತೀರ್ಥಮಂಟಪದವರೆಗೆ ಇರುವ ಮೂವತ್ಮೂರು ಶಕ್ತಿಯ ಸ್ವರೂಪಗಳನ್ನು ಆಹ್ವಾನಿಸಿ ಮಂತ್ರ, ತಂತ್ರಗಳಿಂದ ಕೂಡಿದ ಆಗಮೋಕ್ತವಾದ ಪರಿಪೂರ್ಣ ವಿಶೇಷ ಸೇವೆಯೇ 'ರಂಗಪೂಜೆ' ಎಂದು ಹಾಸನ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಸಂಸ್ಕೃತ ಉಪನ್ಯಾಸಕ ವೇದ ಬ್ರಹ್ಮಶ್ರೀ ಎನ್. ಪ್ರವೀಣ್ ಕುಮಾರ್ ವ್ಯಾಖ್ಯಾನಿಸಿದರು. ಅವರು ಹಾಸನ ನಗರದ ಗಾಂಧಿಬಜಾರ್ ನಲ್ಲಿರುವ ಸಂಪೂರ್ಣ ಶಿಲಾಮಯ ಶ್ರೀ ಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ಏರ್ಪಡಿಸಿದ್ದ ಶ್ರಾವಣ ಮಾಸದ ಎರಡನೇ ಶುಕ್ರವಾರದ 'ವಾರದ ವಿಶೇಷ ಪೂಜಾ ಕಾರ್ಯಕ್ರಮ' ದಲ್ಲಿ ದೇವಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ಮುಂದುವರೆದ ಅವರು, ಐದು ರಂಗಪೂಜೆ ಸೇವೆಯಿಂದ ಒಂದು ಉತ್ಸವದ ಸೇವೆಯ ಫಲ ಮತ್ತು ಹನ್ನೆರಡು ರಂಗಪೂಜೆ ಸೇವೆಯಿಂದ ಒಂದು ಬ್ರಹ್ಮಕಲಶ ಸೇವೆಯ ಫಲ ಪ್ರಾಪ್ತವಾಗಲಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಗಾಯತ್ರಿ ವಿಶ್ವಕರ್ಮ ಮಹಿಳಾ ಮಂಡಳಿಯವರು ಭಜನಾ ಸೇವೆ, ಕುಮಾರಿ ಅಕ್ಷಯನಿ ವೀಣಾವಾದನ ಸೇವೆ ಮತ್ತು ಕುಮಾರಿ ಅನುಪ್ರಿಯ ಭರತನಾಟ್ಯ ಸೇವೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪೂಜಾ ಸೇವಾರ್ಥದಾರರಾದ ವಿನುತಾ, ಅರ್ಪಿತಾ ಮತ್ತು ನಂದನ್ ರವರುಗಳನ್ನು ಸಾಂಪ್ರದಾಯಿಕವಾಗಿ ಗೌರವಿಸಲಾಯಿತು. ಸಮಾರಂಭದಲ್ಲಿ ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಹೆಚ್. ವಿ. ಹರೀಶ್, ಪೂಜಾ ಸಮಿತಿ ಅಧ್ಯಕ್ಷರಾದ ಹೆಚ್. ಕೆ. ಆನಂದ್, ತಾಲ್ಲೂಕು ವಿಶ್ವಕರ್ಮ ಸಮಾಜದ ಮಾಜಿ ಅಧ್ಯಕ್ಷರಾದ ಹೆಚ್. ಎಸ್. ಶಿವಶಂಕರ್, ಉಪಾಧ್ಯಕ್ಷರಾದ ಎ. ಬ್ಯಾಟರಂಗಾಚಾರ್, ನಿರ್ದೇಶಕರಾದ ಹೆಚ್. ಎಸ್. ಆನಂದ್, ಎಂ. ಟಿ. ಸುರೇಶ್, ಗಾಯತ್ರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಅನಿಲ ಪದ್ಮನಾಭ, ಯುವಕ ಸಮಾಜದ ಕಾರ್ಯದರ್ಶಿ ಟಿ. ಎನ್. ಗಿರೀಶ್, ಎಂ. ಸಿ. ಎಫ್. ನ ಕೆ. ಎ. ಜಗದೀಶ್, ಕೆ. ಎಸ್. ಎಫ್. ಸಿ ಯ ನಿವೃತ್ತ ಉಪ ವ್ಯವಸ್ಥಾಪಕರಾದ ಪ್ರಭಾವತಿ, ಪೊಲೀಸ್ ಇಲಾಖೆಯ ಸುದರ್ಶನ್, ಮಲೆನಾಡು ಶಿಕ್ಷಣ ಸಂಸ್ಥೆಯ ನಿವೃತ್ತ ನೌಕರ ಹೆಚ್. ಟಿ. ನಾರಾಯಣಾಚಾರ್ ಮತ್ತಿತರ ಸಮಾಜದ ಪ್ರಮುಖರು ಹಾಜರಿದ್ದರು. ವರದಿ: ಹೆಚ್ ವಿ ಹರೀಶ್ ಹಾಸನ