ವಿಶ್ವಕರ್ಮ ಕ್ರಿಶ್ಚಿಯನ್ ರದ್ದುಪಡಿಸಿ ಹಾಸನ ವಿಶ್ವಕರ್ಮ ಮುಖಂಡ ಹೆಚ್,ವಿ,ಹರೀಶ್
Nannuru-team
9/21/2025

ಕ್ರಿಶ್ಚಿಯನ್ ಹೆಸರಿನಲ್ಲಿ ಹಿಂದೂ ಜಾತಿಗಳ ವಿಭಜನೆಯಿಂದ ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಕರ್ಮ ಕ್ರಿಶ್ಚಿಯನ್ ಎಂಬುದನ್ನು ತಕ್ಷಣವೇ ರದ್ದು ಮಾಡಬೇಕೆಂದು ಹಾಸನ ಜಿಲ್ಲಾ ವಿ
ಕ್ರಿಶ್ಚಿಯನ್ ಹೆಸರಿನಲ್ಲಿ ಹಿಂದೂ ಜಾತಿಗಳ ವಿಭಜನೆಯಿಂದ ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಕರ್ಮ ಕ್ರಿಶ್ಚಿಯನ್ ಎಂಬುದನ್ನು ತಕ್ಷಣವೇ ರದ್ದು ಮಾಡಬೇಕೆಂದು ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್. ವಿ. ಹರೀಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದೇ ತಿಂಗಳ 22 ರಿಂದ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ನಡೆಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಸಮಾಜ ಭಾಂದವರು ಜಾತಿ ಗಣತಿಗೆ ಗಣತಿದಾರರು ಬಂದಾಗ ಕಡ್ಡಾಯವಾಗಿ ಯಾವುದೇ ಉಪ ಜಾತಿಗಳನ್ನು ಬರೆಸದೇ ಕೇವಲ 'ವಿಶ್ವಕರ್ಮ' ಎಂದು ಬರೆಸಿ ಎಂದು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.




