ಹಾಸನದ ಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ
Nannuru-team
10/11/2025

ಇಂದು ಶುಕ್ರವಾರ ಶ್ರೀ ಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ 'ವಾರದ ವಿಶೇಷ ಪೂಜಾ ಕಾರ್ಯಕ್ರಮ' ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ಪೂಜಾ ಸೇವಾರ್ಥದಾರರಾದ ಶ್
ಇಂದು ಶುಕ್ರವಾರ ಶ್ರೀ ಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ *'ವಾರದ ವಿಶೇಷ ಪೂಜಾ ಕಾರ್ಯಕ್ರಮ'* ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ಪೂಜಾ ಸೇವಾರ್ಥದಾರರಾದ ಶ್ರೀಮತಿ ಕೆ. ಹೆಚ್. ಲೀಲಾವತಿ ಮತ್ತು ಶ್ರೀ ಎಂ. ಪಿ. ಹರೀಶ್ ದಂಪತಿಗಳನ್ನು ಶ್ರೀ ಕ್ಷೇತ್ರದ ಸಂಪ್ರದಾಯದಂತೆ ಗೌರವಿಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ ಪ್ರಜಾವಾಣಿ ದಿನಪತ್ರಿಕೆಯ ಹಾಸನ ಜಿಲ್ಲಾ ವರದಿಗಾರರಾದ ಶ್ರೀ ಚಿದಂಬರಪ್ರಸಾದ್ ದಂಪತಿಗಳನ್ನು ಸಹ ಗೌರವಿಸಲಾಯಿತು.



